ಸುಳ್ವಾಡಿ ಗ್ರಾಮದ ಮಾರಮ್ಮನ ದೇವಾಲಯದಲ್ಲಿ ನೀಡಿದ ವಿಷ ಪ್ರಸಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇ - ದಿನೇ ಸಾವಿನ ಸಂಖ್ಯೆ ಏರುತ್ತಲೇ ಇದೆ. ಇಂದು ಬೆಳಿಗ್ಗೆ ಸಹ ಮೈಸೂರಿನ ಜೆ ಎಸ್ ಎಸ್ ಆಸ್ಪತ್ರೆಯಲ್ಲಿ ಮೈಲಿಬಾಯಿ ಎಂಬುವವರು ಸಾವಿಗೀಡಾಗಿದ್ದರು. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲೆಂದು ಶವಾಗಾರಕ್ಕೆ ಆಗಮಿಸಿದ್ದ ವೇಳೆ ಮೈಲಿಬಾಯಿ ಕುಟುಂಬದವರ ರೋದನ ಕಂಡು ಭಾವುಕರಾಗಿ ಸಚಿವ ಜಿ ಟಿ ದೇವೇಗೌಡರವರು ಸಹ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು.
Senior minister GT Devegowda visited to Temple poisoning victim house and he shows his apathy towards them.